Saturday 18 January 2020

ಧಮ್ಮಪದ ೨೬. ಬ್ರಾಹ್ಮಣವಗ್ಗೋ


 ಧಮ್ಮಪದ

೨೬ಬ್ರಾಹ್ಮಣವಗ್ಗೋ

೩೮೩.
ಛಿನ್ದ ಸೋತಂ ಪರಕ್ಕಮ್ಮ, ಕಾಮೇ ಪನುದ ಬ್ರಾಹ್ಮಣ
ಸಙ್ಖಾರಾನಂ ಖಯಂ ಞತ್ವಾ, ಅಕತಞ್ಞೂಸಿ ಬ್ರಾಹ್ಮಣ

ಕತ್ತರಿಸು ತೃಷ್ಣೆಯ ಪ್ರವಾಹವನ್ನು
ಪರಾಕ್ರಮದಿಂದ, ಕಾಮದಿಂದ ಪಾರಾಗು
ಬ್ರಾಹ್ಮಣ, ಸಂಖಾರಗಳ ಕ್ಷಯವನ್ನು ಅರಿತು
ಅರಚಿತವನ್ನು (ನಿಬ್ಬಾಣ) ತಿಳಿಯುವಂತಾಗು.”       (383)
೩೮೪.
ಯದಾ ದ್ವಯೇಸು ಧಮ್ಮೇಸು, ಪಾರಗೂ ಹೋತಿ ಬ್ರಾಹ್ಮಣೋ
ಅಥಸ್ಸ ಸಬ್ಬೇ ಸಂಯೋಗಾ, ಅತ್ಥಂ ಗಚ್ಛನ್ತಿ ಜಾನತೋ

ಯಾವಾಗ ಎರಡು ಧಮ್ಮಗಳಿಂದ (ಸಮಥ ಮತ್ತು ವಿಪಸ್ಸನ)
ಬ್ರಾಹ್ಮಣನು ಆಚೆಗಿನ ದಡವನ್ನು ತಲುಪುವನೋ ಆಗ ಅಂತಹ ಜ್ಞಾನಿಯ
ಸರ್ವ ಸಂಯೋಜನೆಗಳು ಮಾಯವಾಗುವುದು.”   (384)
೩೮೫.
ಯಸ್ಸ ಪಾರಂ ಅಪಾರಂ ವಾ, ಪಾರಾಪಾರಂ ವಿಜ್ಜತಿ
ವೀತದ್ದರಂ ವಿಸಂಯುತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ದಡದಲ್ಲಿ (ಇಂದ್ರಿಯ ಆಧಾರಗಳು)
ಅಥವಾ ದಡದಲ್ಲಿ (ಇಂದ್ರಿಯ ವಿಷಯಗಳು)
ಇಲ್ಲವೋ, ಯಾರು ದಡ ಅಥವಾ ದಡದಲ್ಲಿ
ಸಿಗಲ್ಪಡುವುದಿಲ್ಲವೋ, ಯಾರು ಅಕ್ಷೋಭ್ಯನೋ,
ಹಾಗು ಸಂಯೋಜನಮುಕ್ತನೋ, ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (385)

೩೮೬.
ಝಾಯಿಂ ವಿರಜಮಾಸೀನಂ, ಕತಕಿಚ್ಚಮನಾಸವಂ
ಉತ್ತಮತ್ಥಮನುಪ್ಪತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಧ್ಯಾನಿಯು, ಕಲೆರಹಿತನು, ಏಕಾಂತದಲ್ಲಿ ಆಸೀನನಾಗಿರುವವನು,
ಮಾಡಬೇಕಾದ ಸರ್ವ ಕಾರ್ಯಗಳನ್ನು ಮಾಡಿರುವವನು,
ಆಸವರಹಿತನು, ಉತ್ತಮೋತ್ತಮವಾದ ಗುರಿಯನ್ನು ಸಾಧಿಸಿರುವವನು,
ಆದ ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.” (386)

೩೮೭.
ದಿವಾ ತಪತಿ ಆದಿಚ್ಚೋ, ರತ್ತಿಮಾಭಾತಿ ಚನ್ದಿಮಾ
ಸನ್ನದ್ಧೋ ಖತ್ತಿಯೋ ತಪತಿ, ಝಾಯೀ ತಪತಿ ಬ್ರಾಹ್ಮಣೋ
ಅಥ ಸಬ್ಬಮಹೋರತ್ತಿಂ [ಸಬ್ಬಮಹೋರತ್ತಂ (?)], ಬುದ್ಧೋ ತಪತಿ ತೇಜಸಾ

ಹಗಲಿನಲ್ಲಿ ಸೂರ್ಯನು ಪ್ರಕಾಶಿಸುತ್ತಾನೆ,
ರಾತ್ರಿಯಲ್ಲಿ ಚಂದಿರನು ಕಾಂತಿಯುಕ್ತನಾಗಿರುತ್ತಾನೆ,
ಯುದ್ಧ ಕವಚಗಳಿಂದ ಕ್ಷತ್ರಿಯನು ಹೊಳೆದರೆ,
ಧ್ಯಾನದಿಂದ ಬ್ರಾಹ್ಮಣನು ಹೊಳೆಯುತ್ತಾನೆ,
ಆದರೆ ಎಲ್ಲಾ ಹಗಲು-ರಾತ್ರಿಯಲ್ಲಿಯು ಬುದ್ಧರು
ತಮ್ಮ ಪರಮ ತೇಜಸ್ಸಿನಿಂದ ಕಂಗೊಳಿಸಿ ಶೋಭಿಸುತ್ತಿರುತ್ತಾನೆ.”        (387)

೩೮೮.
ಬಾಹಿತಪಾಪೋತಿ ಬ್ರಾಹ್ಮಣೋ, ಸಮಚರಿಯಾ ಸಮಣೋತಿ ವುಚ್ಚತಿ
ಪಬ್ಬಾಜಯಮತ್ತನೋ ಮಲಂ, ತಸ್ಮಾ ‘‘ಪಬ್ಬಜಿತೋ’’ತಿ ವುಚ್ಚತಿ

ಪಾಪವನ್ನು ಪರಿತ್ಯಜಿಸಿರುವುದರಿಂದಾಗಿ ಬ್ರಾಹ್ಮಣನೆಂದು,
ಪ್ರಶಾಂತತೆ ಉಂಟುಮಾಡುವ ಚಾರಿತ್ರ್ಯದಿಂದಾಗಿ ಸಮಣನೆಂದು
ಕರೆಯುತ್ತಾನೆ. ತನ್ನ ಕಲ್ಮಶಗಳೆಲ್ಲ ಬಿಟ್ಟಿರುವವನನ್ನು
ಪಬ್ಬಜಿತನೆಂದು ಕರೆಯುತ್ತೇನೆ.”            (388)

೩೮೯.
ಬ್ರಾಹ್ಮಣಸ್ಸ ಪಹರೇಯ್ಯ, ನಾಸ್ಸ ಮುಞ್ಚೇಥ ಬ್ರಾಹ್ಮಣೋ
ಧೀ [ಧಿ (ಸ್ಯಾ ಬ್ಯಾಕರಣೇಸು)] ಬ್ರಾಹ್ಮಣಸ್ಸ ಹನ್ತಾರಂ, ತತೋ ಧೀ ಯಸ್ಸ [ಯೋ + ಅಸ್ಸ = ಯಸ್ಸ] ಮುಞ್ಚತಿ

ಬ್ರಾಹ್ಮಣನಿಗೆ ಹೊಡೆಯಬೇಡಿ,
ಹಾಗೆಯೇ ಹೊಡೆಸಿಕೊಂಡ ಬ್ರಾಹ್ಮಣ ಸಿಟ್ಟಾಗದಿರಲಿ,
ಬ್ರಾಹ್ಮಣನನ್ನು ಹೊಡೆಯುವಂತಹವನಿಗೆ ಧಿಕ್ಕಾರವಿರಲಿ,
ಹಾಗೆಯೇ ಸಿಟ್ಟಾದ ಬ್ರಾಹ್ಮಣನಿಗೆ ಮತ್ತಷ್ಟು ಧಿಕ್ಕಾರವಿರಲಿ.”  (389)

೩೯೦.
ಬ್ರಾಹ್ಮಣಸ್ಸೇತದಕಿಞ್ಚಿ ಸೇಯ್ಯೋ, ಯದಾ ನಿಸೇಧೋ ಮನಸೋ ಪಿಯೇಹಿ
ಯತೋ ಯತೋ ಹಿಂಸಮನೋ ನಿವತ್ತತಿ, ತತೋ ತತೋ ಸಮ್ಮತಿಮೇವ ದುಕ್ಖಂ

ಬ್ರಾಹ್ಮಣನಿಗೆ ಪ್ರಿಯವಾದುದರಿಂದ ಮನಸ್ಸನ್ನು
ನಿಯಂತ್ರಿಸದಷ್ಟು ಸಿಗುವ ಲಾಭ ಅಲ್ಪವೇನಲ್ಲ.
ಹಿಂಸೆಯಿಂದ ಮನಸ್ಸು ವಿಮುಖವಾದಷ್ಟು
ದುಃಖವು ಅಷ್ಟಷ್ಟು ಇನ್ನಿಲ್ಲವಾಗುವುದು.”  (390)

೩೯೧.
ಯಸ್ಸ ಕಾಯೇನ ವಾಚಾಯ, ಮನಸಾ ನತ್ಥಿ ದುಕ್ಕಟಂ
ಸಂವುತಂ ತೀಹಿ ಠಾನೇಹಿ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಕಾಯದಿಂದಾಗಲಿ, ವಾಚಾದಿಂದಾಗಲಿ,
ಅಥವಾ ಮನಸ್ಸಿನಿಂದಾಗಲಿ, ದುಷ್ಕೃತ್ಯ ಮಾಡುವುದಿಲ್ಲವೋ
ರೀತಿಯಲ್ಲಿ ಸಂಯಮಿತರಾದವರನ್ನು
ನಾನು ಬ್ರಾಹ್ಮಣ ಎನ್ನುವೆನು.” (391)

೩೯೨.
ಯಮ್ಹಾ ಧಮ್ಮಂ ವಿಜಾನೇಯ್ಯ, ಸಮ್ಮಾಸಮ್ಬುದ್ಧದೇಸಿತಂ
ಸಕ್ಕಚ್ಚಂ ತಂ ನಮಸ್ಸೇಯ್ಯ, ಅಗ್ಗಿಹುತ್ತಂವ ಬ್ರಾಹ್ಮಣೋ

ಯಾರಿಂದ ಒಬ್ಬನು ಸಮ್ಮಾಸಂಬುದ್ಧರ
ಉಪದೇಶವನ್ನು ತಿಳಿಯಲ್ಪಟ್ಟಿರುವನೋ,
ಅಂತಹವರನ್ನು ಹೇಗೆ ಬ್ರಾಹ್ಮಣನು
ಅಗ್ನಿಹೋತ್ರವನ್ನು ಪೂಜಿಸುವನೋ ಹಾಗೇ
ಗೌರವದಿಂದ ನಮಸ್ಕರಿಸಬೇಕು.”          (392)

೩೯೩.
ಜಟಾಹಿ ಗೋತ್ತೇನ, ಜಚ್ಚಾ ಹೋತಿ ಬ್ರಾಹ್ಮಣೋ
ಯಮ್ಹಿ ಸಚ್ಚಞ್ಚ ಧಮ್ಮೋ , ಸೋ ಸುಚೀ ಸೋ ಬ್ರಾಹ್ಮಣೋ

ಜಾತಿಯಿಂದಾಗಲಿ, ಗೋತ್ರದಿಂದಾಗಲಿ
ಅಥವಾ ಜಟೆಯಿಂದಾಗಲಿ ಬ್ರಾಹ್ಮಣನಾಗಲಾರ,
ಯಾರಲ್ಲಿ ಸತ್ಯ, ಧಮ್ಮ, ಶುಚಿ ಇರುವುದೋ
ಆತನೇ ಬ್ರಾಹ್ಮಣ.” (393)

೩೯೪.
ಕಿಂ ತೇ ಜಟಾಹಿ ದುಮ್ಮೇಧ, ಕಿಂ ತೇ ಅಜಿನಸಾಟಿಯಾ
ಅಬ್ಭನ್ತರಂ ತೇ ಗಹನಂ, ಬಾಹಿರಂ ಪರಿಮಜ್ಜಸಿ

ಜಟೆಯಿಂದೇನು ಲಾಭ? ಮೂರ್ಖನೇ!
ಕೃಷ್ಣಾಜೀನದಿಂದೇನು (ಜಿಂಕೆಯ ಚರ್ಮ) ಪ್ರಯೋಜನ?
ಆಂತರ್ಯದಲ್ಲಿ ಕಲ್ಮಶಗಳಿಂದ (ಸಂಗ್ರಹೇಚ್ಛೆಯಿಂದ) ಕೂಡಿರುವೆ
ಆದರೆ ಬಾಹ್ಯದಲ್ಲಿ ಮಾತ್ರ ಅಲಂಕೃತನಾಗಿರುವೆ.”  (394)

೩೯೫.
ಪಂಸುಕೂಲಧರಂ ಜನ್ತುಂ, ಕಿಸಂ ಧಮನಿಸನ್ಥತಂ
ಏಕಂ ವನಸ್ಮಿಂ ಝಾಯನ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಹರಿದ ಬಟ್ಟೆಗಳಿಂದ ಚೀವರ ಮಾಡಿ ಧರಿಸಿದಂತಹ,
ಕೃಶನಾಗಿರುವ, ನರಗಳು ಎದ್ದು ಕಾಣಿಸುವಂತಹ ಶರೀರದ,
ಏಕಾಂಗಿಯಾಗಿ ವನದಲ್ಲಿ ಸದಾ ಧ್ಯಾನಿಸುವಂತಹವರನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (395)

೩೯೬.
ಚಾಹಂ ಬ್ರಾಹ್ಮಣಂ ಬ್ರೂಮಿ, ಯೋನಿಜಂ ಮತ್ತಿಸಮ್ಭವಂ
ಭೋವಾದಿ ನಾಮ ಸೋ ಹೋತಿ, ಸಚೇ ಹೋತಿ ಸಕಿಞ್ಚನೋ
ಅಕಿಞ್ಚನಂ ಅನಾದಾನಂ, ತಮಹಂ ಬ್ರೂಮಿ ಬ್ರಾಹ್ಮಣಂ

ಕೇವಲ ಮಾತೃ ಗರ್ಭದಲ್ಲಿ ಹುಟ್ಟಿದ ಮಾತ್ರಕ್ಕೆ
ನಾನು ಆತನನ್ನು ಬ್ರಾಹ್ಮಣನೆಂದು ಕರೆಯಲಾರೆ.
ಆತನು ಎಲ್ಲವನ್ನು ಬಯಸುತ್ತಾ ಸಾಮಿತ್ವ ಭಾವನೆ
ಹೊಂದಿರುವನಾದರೆ ನಾನು ಆತನಿಗೆ ದರ್ಪದವನೆನ್ನುತ್ತೇನೆ.
ಆದರೆ ಯಾರು ಯಾವುದಕ್ಕೂ ಅಂಟದೆ ಏನನ್ನೂ ಹೊಂದಿಲ್ಲವೋ
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.”        (396)

೩೯೭.
ಸಬ್ಬಸಂಯೋಜನಂ ಛೇತ್ವಾ, ಯೋ ವೇ ಪರಿತಸ್ಸತಿ
ಸಙ್ಗಾತಿಗಂ ವಿಸಂಯುತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಸರ್ವ ಸಂಯೋಜನಗಳನ್ನು ಕತ್ತರಿಸಿ
ಯಾರು ಯಾವುದಕ್ಕೂ ಕಂಪಿಸುವುದಿಲ್ಲವೋ
ಯಾರು ಎಲ್ಲಾ ಬಂಧನಗಳಿಗೆ ಅತೀತನಾಗಿರುವನೋ
ಬಂಧನಮುಕ್ತನೋ ಅಂತಹವನಿಗೆ ನಾನು
ಬ್ರಾಹ್ಮಣ ಎನ್ನುತ್ತೇನೆ.”           (397)

೩೯೮.
ಛೇತ್ವಾ ನದ್ಧಿಂ [ನನ್ಧಿಂ ( ಸೀ), ನನ್ದಿಂ (ಪೀ)] ವರತ್ತಞ್ಚ, ಸನ್ದಾನಂ [ಸನ್ದಾಮಂ (ಸೀ)] ಸಹನುಕ್ಕಮಂ
ಉಕ್ಖಿತ್ತಪಲಿಘಂ ಬುದ್ಧಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು (ದ್ವೇಷವೆಂಬ) ಚರ್ಮದ ಪಟ್ಟಿಯನ್ನು,
(ತೃಷ್ಣೆಯ) ಲಗಾಮನ್ನು ಮತ್ತು (ಮಿಥ್ಯಾದೃಷ್ಟಿಗಳ) ಹಗ್ಗಗಳನ್ನು,
(ಸುಪ್ತ ಪ್ರವೃತ್ತಿಗಳ) ಲೋಹಗಳ ಕಟ್ಟಿನ ಉಪಕರಣಗಳನ್ನು ಕತ್ತರಿಸಿ,
(ಅವಿದ್ಯೆಯ) ಅಡ್ಡಗೋಲನ್ನು ಎಸೆದು, ಜ್ಞಾನೋದಯ
ಪಡೆದಿರುವನೋ (ಬುದ್ಧ) ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”     
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.”  (398)

೩೯೯.
ಅಕ್ಕೋಸಂ ವಧಬನ್ಧಞ್ಚ, ಅದುಟ್ಠೋ ಯೋ ತಿತಿಕ್ಖತಿ
ಖನ್ತೀಬಲಂ ಬಲಾನೀಕಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಕೋಪರಹಿತನಾಗಿ ಬಯ್ಗಳನ್ನು,
ಹೊಡೆತಗಳನ್ನು ಮತ್ತು ಬಂಧನವನ್ನು ಸಹಿಸುತ್ತಾನೋ,
ಯಾರ ಕ್ಷಾಂತಿ ಬಲವು (ಕ್ಷಮಾಯುತ ಸಹನೆ) ಸೈನ್ಯದಷ್ಟೇ ಬಲಿಷ್ಠವೋ,
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (399)

೪೦೦.
ಅಕ್ಕೋಧನಂ ವತವನ್ತಂ, ಸೀಲವನ್ತಂ ಅನುಸ್ಸದಂ
ದನ್ತಂ ಅನ್ತಿಮಸಾರೀರಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಅಕ್ರೋಧನೋ, ಧಮ್ಮದಲ್ಲಿ ಪರಿಶ್ರಮಿಯೋ,
ಶೀಲವಂತನೋ, ಯಾರಲ್ಲಿ ತೃಷ್ಣೆ ಹರಿಯದೋ,
ಧಮಿಸಲ್ಪಟ್ಟವನೋ, ಅಂತಿಮ ಶರೀರವನ್ನು
ಹೊಂದಿರುವನೋ ಅಂಥವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”           (400)

೪೦೧.
ವಾರಿ ಪೋಕ್ಖರಪತ್ತೇವ, ಆರಗ್ಗೇರಿವ ಸಾಸಪೋ
ಯೋ ಲಿಮ್ಪತಿ [ಲಿಪ್ಪತಿ (ಸೀ ಪೀ)] ಕಾಮೇಸು, ತಮಹಂ ಬ್ರೂಮಿ ಬ್ರಾಹ್ಮಣಂ

ಕಮಲದ ಎಲೆಯ ಮೇಲಿರುವ ನೀರಿನಂತೆ
ಅಥವಾ ಸೂಜಿಯ ತುದಿಯಲ್ಲಿರುವ ಸಾಸುವೆ ಕಾಳಿನಂತೆ
ಯಾರು ಕಾಮಗಳಿಗೆ ಲಿಪ್ತರಾಗುವುದಿಲ್ಲವೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (401)

೪೦೨.
ಯೋ ದುಕ್ಖಸ್ಸ ಪಜಾನಾತಿ, ಇಧೇವ ಖಯಮತ್ತನೋ
ಪನ್ನಭಾರಂ ವಿಸಂಯುತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಲೋಕದಲ್ಲಿ
ದುಕ್ಖ ಕ್ಷಯವನ್ನೇ ಸಾಕ್ಷಾತ್ಕರಿಸಿರುವನೋ,
ತನ್ನ ಹೊರೆಯನ್ನು ಕೆಳಗೆ ಇರಿಸಿರುವನೋ
ಬಂಧನಮುಕ್ತನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”               (402)

೪೦೩.
ಗಮ್ಭೀರಪಞ್ಞಂ ಮೇಧಾವಿಂ, ಮಗ್ಗಾಮಗ್ಗಸ್ಸ ಕೋವಿದಂ
ಉತ್ತಮತ್ಥಮನುಪ್ಪತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರ ಪ್ರಜ್ನೆಯು ಗಂಭೀರವಾದುದೋ,
ಯಾರು ಮೇಧಾವಿಯೋ, ಯಾರು ಲೋಕೋತ್ತರ
ಮಾರ್ಗ ಮತ್ತು ಅಮಾರ್ಗದಲ್ಲಿ ನೈಪುಣ್ಯತೆ ಸಾಧಿಸಿರುವನೋ
ಯಾರು ಉತ್ತಮೋತ್ತಮ ಗುರಿಯನ್ನು ಸಾಧಿಸಿರುವನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (403)

೪೦೪.
ಅಸಂಸಟ್ಠಂ ಗಹಟ್ಠೇಹಿ, ಅನಾಗಾರೇಹಿ ಚೂಭಯಂ
ಅನೋಕಸಾರಿಮಪ್ಪಿಚ್ಛಂ, ತಮಹಂ ಬ್ರೂಮಿ ಬ್ರಾಹ್ಮಣಂ

ಗೃಹಸ್ಥರಿಂದ ಹಾಗೆಯೇ ಗೃಹ ತೊರೆದವರಿಂದಲೂ
ಬೆರೆಯದೆ, ಮನೆಯಿಲ್ಲದೆ (ಅನಿಕೇತನನಾಗಿ) ಪರಿವ್ರಾಜಕನಾಗಿ,
ಯಾವುದೇ ಬಯಕೆಗಳಿಲ್ಲದೆ ಇರುವಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (404)

೪೦೫.
ನಿಧಾಯ ದಣ್ಡಂ ಭೂತೇಸು, ತಸೇಸು ಥಾವರೇಸು
ಯೋ ಹನ್ತಿ ಘಾತೇತಿ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಭಯಪಡುವಂತಹ ಅಥವಾ ಧೈರ್ಯವುಳ್ಳಂತಹ
ಯಾವ ಜೀವಿಗಳಿಗೂ ಹಿಂಸಿಸದೆ ದಂಡಶಸ್ತ್ರಗಳ ತ್ಯಾಗ ಮಾಡಿರುವನೋ,
ಯಾರು ಜೀವಿಗಳಿಗೆ ಹತ್ಯೆ ಮಾಡುವುದಿಲ್ಲವೋ ಅಥವಾ
ಹಿಂಸೆ ಮಾಡುವುದಿಲ್ಲವೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”           (405)

೪೦೬.
ಅವಿರುದ್ಧಂ ವಿರುದ್ಧೇಸು, ಅತ್ತದಣ್ಡೇಸು ನಿಬ್ಬುತಂ
ಸಾದಾನೇಸು ಅನಾದಾನಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ದ್ವೇಷವುಳ್ಳವರ ನಡುವೆ ದ್ವೇಷರಹಿತರಾಗಿರುವರೋ
ಹಿಂಸೆಭಾವನೆಯುಳ್ಳವರ ನಡುವೆ ಶಾಂತರಾಗಿರುವರೋ,
ಸ್ವಾರ್ಥಿಗಳ ನಡುವೆ ನಿರ್ಲಿಪ್ತರಾಗಿರುವರೋ ಅಂತಹವರಿಗೆ
ನಾನು ಬ್ರಾಹ್ಮಣ ಎನ್ನುತ್ತೇನೆ.”                (406)

೪೦೭.
ಯಸ್ಸ ರಾಗೋ ದೋಸೋ , ಮಾನೋ ಮಕ್ಖೋ ಪಾತಿತೋ
ಸಾಸಪೋರಿವ ಆರಗ್ಗಾ [ಆರಗ್ಗೇ ()], ತಮಹಂ ಬ್ರೂಮಿ ಬ್ರಾಹ್ಮಣಂ
ಯಾರಲ್ಲಿ ರಾಗ, ದ್ವೇಷ, ಅಹಂಕಾರ ಮತ್ತು ಅವಿಧೇಯತೆಗಳು
ಸೂಜಿಯ ತುದಿಯಲ್ಲಿನ ಸಾಸುವೆ ಕಾಳಿನಂತೆ ಬಿದ್ದು ಹೋಗಿದೆಯೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (407)

೪೦೮.
ಅಕಕ್ಕಸಂ ವಿಞ್ಞಾಪನಿಂ, ಗಿರಂ ಸಚ್ಚಮುದೀರಯೇ
ಯಾಯ ನಾಭಿಸಜೇ ಕಞ್ಚಿ [ಕಿಞ್ಚಿ ()], ತಮಹಂ ಬ್ರೂಮಿ ಬ್ರಾಹ್ಮಣಂ

ಯಾರ ನುಡಿಗಳು ತಿಳುವಳಿಕೆಯುತವೋ,
ಸತ್ಯಭರಿತವೋ, ಸಭ್ಯವೋ
ಯಾರಿಗೂ ಉದ್ರೇಕವಾಗಲಿ, ನೋವಾಗಲಿ ತರದೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (408)

೪೦೯.
ಯೋಧ ದೀಘಂ ರಸ್ಸಂ ವಾ, ಅಣುಂ ಥೂಲಂ ಸುಭಾಸುಭಂ
ಲೋಕೇ ಅದಿನ್ನಂ ನಾದಿಯತಿ [ನಾದೇತಿ ( ನಿ .೪೫೯)], ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ತನಗೆ ನೀಡದುದ್ದನ್ನು ಅದು
ಉದ್ದವಾಗಿಯೇ ಇರಲಿ ಅಥವಾ ಗಿಡ್ಡದಾಗಿಯೇ ಇರಲಿ,
ಅಣುವಿನಷ್ಟೇ (ಚಿಕ್ಕದಾಗಿ) ಇರಲಿ ಅಥವಾ ದೊಡ್ಡದಾಗಿಯೇ ಇರಲಿ,
ಸುಂದರವಾಗಿಯೇ ಇರಲಿ, ಕುರೂಪವಾಗಿಯೇ ಇರಲಿ,
ತೆಗೆದುಕೊಳ್ಳುವುದಿಲ್ಲವೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”          (409)

೪೧೦.
ಆಸಾ ಯಸ್ಸ ವಿಜ್ಜನ್ತಿ, ಅಸ್ಮಿಂ ಲೋಕೇ ಪರಮ್ಹಿ
ನಿರಾಸಾಸಂ [ನಿರಾಸಯಂ (ಸೀ ಸ್ಯಾ ಪೀ), ನಿರಾಸಕಂ (?)] ವಿಸಂಯುತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರಿಗೆ ಲೋಕದ ಅಥವಾ ಪರಲೋಕದ
ಯಾವ ಬಯಕೆಗಳೂ ಇಲ್ಲವೋ,
ಯಾರು ಆಸೆರಹಿತನೋ ಹಾಗು ಕಲ್ಮಶರಹಿತನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (410)

೪೧೧.
ಯಸ್ಸಾಲಯಾ ವಿಜ್ಜನ್ತಿ, ಅಞ್ಞಾಯ ಅಕಥಂಕಥೀ
ಅಮತೋಗಧಮನುಪ್ಪತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರಲ್ಲಿ ಅವಲಂಬನೆ ಕಾಣಲಾಗುವುದಿಲ್ಲವೋ,
ಪರಮಾರ್ಥದ ಪ್ರಜ್ಞೆಯಿಂದ ಸಂಶಯಗಳಿಂದ ಮುಕ್ತನೋ,
ಯಾರು ಅಮರತ್ವದ ಆಳಕ್ಕೆ ಮುಳುಗಿರುವನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (411)

೪೧೨.
ಯೋಧ ಪುಞ್ಞಞ್ಚ ಪಾಪಞ್ಚ, ಉಭೋ ಸಙ್ಗಮುಪಚ್ಚಗಾ
ಅಸೋಕಂ ವಿರಜಂ ಸುದ್ಧಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಪುಣ್ಯದ ಮತ್ತು ಪಾಪದ ಬಂಧನಗಳಿಗೆ
ಅತೀತನಾಗಿರುವನೋ, ಅಶೋಕನೋ (ಶೋಕವಿಲ್ಲದವನು)
ವಿರಜನೋ (ಕಲೆರಹಿತನೋ), ಶುದ್ಧನೋ ಅಂತಹನಿಗೆ
ನಾನು ಬ್ರಾಹ್ಮಣ ಎನ್ನುತ್ತೇನೆ.”                (412)

೪೧೩.
ಚನ್ದಂವ ವಿಮಲಂ ಸುದ್ಧಂ, ವಿಪ್ಪಸನ್ನಮನಾವಿಲಂ
ನನ್ದೀಭವಪರಿಕ್ಖೀಣಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಚಂದಿರನಂತೆ ವಿಮುಲನೋ,
ಶುದ್ಧನೋ, ಪ್ರಶಾಂತನೋ, ಅಕ್ಷೋಭನೋ,
ಭವದ (ಇರುವಿಕೆಯ) ಬಯಕೆಯನ್ನು
ಇಲ್ಲವಾಗಿಸಿಹನೋ ಅಂತಹನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (413)

೪೧೪.
ಯೋಮಂ [ಯೋ ಇಮಂ (ಸೀ ಸ್ಯಾ ಕಂ ಪೀ)] ಪಲಿಪಥಂ ದುಗ್ಗಂ, ಸಂಸಾರಂ ಮೋಹಮಚ್ಚಗಾ
ತಿಣ್ಣೋ ಪಾರಗತೋ [ಪಾರಗತೋ (ಸೀ ಸ್ಯಾ ಕಂ ಪೀ)] ಝಾಯೀ, ಅನೇಜೋ ಅಕಥಂಕಥೀ
ಅನುಪಾದಾಯ ನಿಬ್ಬುತೋ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಅಪಾಯಕಾರಿಯಾದ ಕೆಸರನ್ನು (ಭಾವೋದ್ರೇಕ)
ದಾಟಿದ್ದಾನೆಯೋ, ದುರ್ಗಮವಾದ ದಾರಿಯನ್ನು (ಕಲ್ಮಶಗಳನ್ನು)
ಹಾದುಹೋಗಿರುವನೋ, ಸಂಸಾರದ ಸಾಗರವನ್ನೇ ದಾಟಿರುವನೋ ಮತ್ತು
ಮೋಹಾಂಧಕಾರವನ್ನು ಹಾಗು ನಾಲ್ಕು ಬಗೆಯ ಪ್ರವಾಹವನ್ನು
ದಾಟಿ ಬದಿಯ ದಡವನ್ನು (ನಿಬ್ಬಾಣ)
ತಲುಪಿರುವನೋ, ಯಾರು ಸಮಥ ಮತ್ತು ವಿಪಸ್ಸನವನ್ನು
ಅಭ್ಯಸಿಸಿ, ತೃಷ್ಣೆ ಮುಕ್ತನಾಗಿ, ಸಂದೇಹ ದೂರವಾಗಿ, ಯಾವುದಕ್ಕೂ
ಅಂಟದೆ, ಪರಿಪೂರ್ಣ ಶಾಂತತೆಯಲ್ಲಿಹನೋ ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (414)

೪೧೫.
ಯೋಧ ಕಾಮೇ ಪಹನ್ತ್ವಾನ [ಪಹತ್ವಾನ (ಸೀ ಪೀ)], ಅನಾಗಾರೋ ಪರಿಬ್ಬಜೇ
ಕಾಮಭವಪರಿಕ್ಖೀಣಂ, ತಮಹಂ ಬ್ರೂಮಿ ಬ್ರಾಹ್ಮಣಂ [ಇದಂ ಗಾಥಾದ್ವಯಂ ವಿದೇಸಪೋತ್ಥಕೇಸು ಸಕಿದೇವ ದಸ್ಸಿತಂ]

ಯಾರು ಇಲ್ಲಿ ಕಾಮವನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿರುವನೋ,
ಯಾರು ಕಾಮನೆಗಳನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ಬ್ರಾಹ್ಮಣ ಎನ್ನುತ್ತೇನೆ.”     (415)

೪೧೬.
ಯೋಧ ತಣ್ಹಂ ಪಹನ್ತ್ವಾನ, ಅನಾಗಾರೋ ಪರಿಬ್ಬಜೇ
ತಣ್ಹಾಭವಪರಿಕ್ಖೀಣಂ , ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಇಲ್ಲಿ ತೃಷ್ಣೆಯನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿ
ಯಾರು ತೃಷ್ಣೆಯನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”          (416)

೪೧೭.
ಹಿತ್ವಾ ಮಾನುಸಕಂ ಯೋಗಂ, ದಿಬ್ಬಂ ಯೋಗಂ ಉಪಚ್ಚಗಾ
ಸಬ್ಬಯೋಗವಿಸಂಯುತ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಮನುಷ್ಯ ಲೋಕದ ಬಂಧನಗಳನ್ನು ತ್ಯಜಿಸಿ,
ದಿವ್ಯಲೋಕಗಳ ಬಂಧನಗಳಿಂದಲೂ ಮೀರಿ ಹೋಗಿರುವನೋ,
ಪ್ರತಿ ಬಂಧನಗಳಿಂದಲೂ ಪೂರ್ಣ ಮುಕ್ತನೋ
ಅಂಥವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”         (417)


೪೧೮.
ಹಿತ್ವಾ ರತಿಞ್ಚ ಅರತಿಞ್ಚ, ಸೀತಿಭೂತಂ ನಿರೂಪಧಿಂ
ಸಬ್ಬಲೋಕಾಭಿಭುಂ ವೀರಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಬೇಸರ (ಅನಿಷ್ಟ) ಹಾಗು ಆನಂದ (ಇಷ್ಟ) ಗಳನ್ನು ವರ್ಜಿಸಿರುವನೋ,
ಶಾಂತಸ್ವರೂಪಿಯಾಗಿ, ಕಲ್ಮಶರಹಿತನಾಗಿರುವನೋ,
ಯಾರು ಸರ್ವ ಲೋಕಗಳನ್ನು ಜಯಿಸಿದ ವೀರನೋ
ಅಂತಹ ಪ್ರಯತ್ನಶಾಲಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.”       (418)

೪೧೯.
ಚುತಿಂ ಯೋ ವೇದಿ ಸತ್ತಾನಂ, ಉಪಪತ್ತಿಞ್ಚ ಸಬ್ಬಸೋ
ಅಸತ್ತಂ ಸುಗತಂ ಬುದ್ಧಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಜೀವಿಗಳ ಮರಣವನ್ನು ಮತ್ತು ಪುನಃ ಉತ್ಪತ್ತಿಯನ್ನು
ಸರ್ವಹಂತದಲ್ಲೂ ಅರಿತಿರುವನೋ, ಹಾಗು ಅಂಟದವನೋ,
ಸುಗತನೋ, ಬುದ್ಧನೋ ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.”                (419)

೪೨೦.
ಯಸ್ಸ ಗತಿಂ ಜಾನನ್ತಿ, ದೇವಾ ಗನ್ಧಬ್ಬಮಾನುಸಾ
ಖೀಣಾಸವಂ ಅರಹನ್ತಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರ ಗತಿಯನ್ನು ದೇವ, ಗಂಧರ್ವ, ಮನುಷ್ಯರ್ಯಾರು
ತಿಳಿಯಲಾರರೋ, ಕ್ಷೀಣಾಸವನೋ
(ಅಸವಗಳನ್ನು ಕ್ಷೀಣಿಸಿ ನಾಶಗೊಳಿಸಿರುವವನೋ)
ಅರಹಂತನೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”             (420)

೪೨೧.
ಯಸ್ಸ ಪುರೇ ಪಚ್ಛಾ , ಮಜ್ಝೇ ನತ್ಥಿ ಕಿಞ್ಚನಂ
ಅಕಿಞ್ಚನಂ ಅನಾದಾನಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ಪ್ರತಿಯೊಂದರ ಭೂತಕಾಲಕ್ಕಾಗಲಿ, ಭವಿಷ್ಯಕ್ಕಾಗಲಿ ಅಥವಾ
ವರ್ತಮಾನಕ್ಕಾಗಲಿ ಅಂಟಿಲ್ಲವೋ, ಆದರೂ ತನ್ನದೆಂದು
ಯಾವುದಕ್ಕೂ ಭಾವಿಸುವುದಿಲ್ಲವೋ, ಲಿಪ್ತರಹಿತನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (421)

೪೨೨.
ಉಸಭಂ ಪವರಂ ವೀರಂ, ಮಹೇಸಿಂ ವಿಜಿತಾವಿನಂ
ಅನೇಜಂ ನ್ಹಾತಕಂ [ನಹಾತಕಂ (ಸೀ ಸ್ಯಾ ಕಂ ಪೀ)] ಬುದ್ಧಂ, ತಮಹಂ ಬ್ರೂಮಿ ಬ್ರಾಹ್ಮಣಂ

ಭಯರಹಿತನು, ಉದಾತ್ತನು, ಪರಮವೀರನು,
ಮಹರ್ಷಿಯು, ಸರ್ವವಿಜಯಿಯು,
ಆಸೆರಹಿತನು (ದೋಷರಹಿತನು) ಪರಿಶುದ್ಧನಾಗಿರುವವನು,
ಆರ್ಯಸತ್ಯಗಳನ್ನು ಅರಿತವನು (ಬುದ್ಧ)
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.”      (422)

೪೨೩.
ಪುಬ್ಬೇನಿವಾಸಂ ಯೋ ವೇದಿ, ಸಗ್ಗಾಪಾಯಞ್ಚ ಪಸ್ಸತಿ,
ಅಥೋ ಜಾತಿಕ್ಖಯಂ ಪತ್ತೋ, ಅಭಿಞ್ಞಾವೋಸಿತೋ ಮುನಿ
ಸಬ್ಬವೋಸಿತವೋಸಾನಂ, ತಮಹಂ ಬ್ರೂಮಿ ಬ್ರಾಹ್ಮಣಂ

ಯಾರು ತನ್ನ ಹಿಂದಿನ ಜನ್ಮಗಳನ್ನು ನೋಡಿರುವವನೋ,
ಯಾರು ಸ್ವರ್ಗವನ್ನು ಮತ್ತು ಅಪಾಯ ಲೋಕಗಳನ್ನು ನೋಡಿರುವವನೋ,
ಯಾರು ಜನ್ಮಗಳ ಅಂತ್ಯಕ್ಕೆ ತಲುಪಿರುವವನೋ,
ಯಾರು ಅಭಿಜ್ಞಾಗಳನ್ನು ಸಾಧಿಸಿದ ಮುನಿಯೋ,
ಯಾರು ಭಿಕ್ಷು ಜೀವನದಲ್ಲಿ ಪರಿಪೂರ್ಣತೆ ಸಾಧಿಸಿರುವನೋ,
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.”        (423)


ಬ್ರಾಹ್ಮಣವಗ್ಗೋ ಛಬ್ಬೀಸತಿಮೋ ನಿಟ್ಠಿತೋ

ಇಲ್ಲಿಗೆ ಇಪ್ಪತ್ತಾರನೆಯ ಬ್ರಾಹ್ಮಣವಗ್ಗವು ಮುಗಿಯಿತು.

ಧಮ್ಮಪದಪಾಳಿ ನಿಟ್ಠಿತಾ

 ಇಲ್ಲಿಗೆ ಧಮ್ಮಪದ ಕನ್ನಡ ಮುಗಿಯಿತು.